ಗುರಿ

ಆಗಬೇಡ ಎಂದಿಗೂ ನೀ, ಯಾರದ್ದೋ ಹರಕೆಯ ಕುರಿ ।

ಆಡಿಕೊಳ್ಳುವವರನ್ನ, ಸಾಧನೆಯ ಮೂಲಕ ಹೆಡೆ-ಮುರಿ ।।

ಏಕೆಂದರೆ ಜೀವನದಲ್ಲಿ, ಗೆಲ್ಲುವುದೇ ನಮಗೆ ಮುಖ್ಯ ಗುರಿ ।

ಇಲ್ಲವಾದರೆ, ನಿನ್ನ ಮುಡಿಗೆ ಬರಲಾರದು ಯಾವುದೇ ಗರಿ ।।

-ಬೀರಪ್ಪ

ಕನಸು

ಬಲ್ಲದ ವಿದ್ಯೆ, ಇಲ್ಲ ಸಲ್ಲದ ಮಾತು, ಒಲ್ಲದ ಮನಸ್ಸು ।

ಮುರುಕು ಧರ್ಮಶಾಲೆಯ, ಹರುಕು ಬಟ್ಟೆಯ ತಿರುಕನ ಕನಸು ।।

ಕಾರ್ಯಪ್ರವೃತ್ತರಾಗದಿದ್ದರೆ, ಎಂದಿಗೂ ಆಗುವುದಿಲ್ಲ ನನಸು ।

ಖಾರವಾಗಿ ಪ್ರತಿಕ್ರಿಯಿಸಿದ್ದಕ್ಕೆ, ಮಾಡಿಕೊಳ್ಳದಿರಿ ಮುನಿಸು ।।

ಬೀರಪ್ಪ

ಕುಟಿಲ

ತನ್ನ ಕುಟಿಲತೆಯ ಮೂಲಕ ಶಕುನಿಯನ್ನೇ ನಾಚಿಸುವಂತ ದೇಶ ಈ ಚೀನಾ

ಕಂಡವರ ಆಸ್ತಿಯನ್ನ, ತನ್ನ ಸಾರ್ವಭೌಮತಕ್ಕೆ ಧಕ್ಕೆ ತರುವುದೆಂದು ಮಾಡುತ್ತದೆ ವಿಲೀನ|

ಅದರ ವಿಷ ಕಕ್ಕುವ ಸಿದ್ಧಾಂತದ ಮೂಲಕ ಮಾಡುತ್ತದೆ ಜಗದ ಪ್ರತಿಯೊಂದು ಮೂಲೆಯಲ್ಲಿ ಮಲೀನ

ವಾಮ ಸಿದ್ಧಾಂತದ ಅಡಿಯಾಳಾಗುವ ಮೂಲಕ, ನಮ್ಮಲ್ಲಿ ಕೆಲವರು ಆಗಿರುವರು ಮತಿಹೀನ||

ಓರಾಟಗಾರ

ಹಿಂದಿನ ಕಾಲದಲ್ಲಿ, ಇಲಿಯ ಬಾಲಕ್ಕೆ ಬಾಂಬ್ ಕಟ್ಟಿ ಮಾಡುತ್ತಿದ್ದರಂತೆ ಅಹಿಂಸೆಯ ಹೋರಾಟ।

ಈಗಿನ ಕಾಲದಲ್ಲಿ, ದೇಶದ ಒಳಿತಿಗಾಗಿ ಯೋಚಿಸುವವರನ್ನ ಕಂಡರೆ ಮಾಡುತ್ತಾರೆ ಭಾವೋದ್ವೇಗದ ಹಾರಾಟ ।।

ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿರುವ ಪುರಾವೆ ಕೇಳಿದರೆ, ಮನದಲ್ಲಿ ಏನೋ ಒಂದು ರೀತಿಯ ತೊಳಲಾಟ ।

ಕಾರಣವೇನೆಂದರೆ, ಹಿಂದೆ ಬಳೆಪೇಟೆಯ ಕಚೇರಿಯೊಂದರಲ್ಲಿ ನಡೆಯುತಿತ್ತು ದಾಖಲೆಗಳ ಮಾರಾಟ ।।

ಆಕೆ

ಆಕೆ ಮಾತನಾಡುವುದನ್ನ ಕೇಳೋಕೆ ಬಹಳ ಚೆನ್ನ

ಹರಟಿದರೆ,ಸರಿಯಾಗಿ ಕೊಡುತ್ತಾಳೆ ನಿನಗೆ ಗುನ್ನಾ ।

ಬೇಗನೆ ಕಾಲ್ಕೀಳು,ಆಕೆಯು ಕುಪಿತಗೊಳ್ಳುವ ಮುನ್ನ

ಇಲ್ಲದಿದ್ದರೆ,ಹರಿಬ್ರಹ್ಮರೂ ಬರಬೇಕು ಉಳಿಸಲು ನಿನ್ನ ।।

ಕರ್ಮ

ಎಂದಿಗೂ, ಕೈಲಾದಷ್ಟು ಮಾಡು ನೀ, ದಾನ ಧರ್ಮ

ಏಕೆಂದರೆ, ಅದರ ಹಿಂದಿದೆ ಬಹುದೊಡ್ಡ ಮರ್ಮ ।

ಫಲವ ಅನುಭವಿಸುವೆ, ಮಾಡಿರುವ ಗತಕಾಲದ ಕರ್ಮ

ಕಂಟಕನಾದರೆ, ವಿಧಿಯೂ ಸುಲಿಯುವುದು ನಿನ್ನ ಚರ್ಮ।।

On completing a year as blogger

I am glad to inform all of you, that I have completed a year on WordPress as a blogger. Thank you all for supporting me on this journey!

A small poem as a tribute to my audience.

ಓದುಗ

ಎಂದಿಗೂ, ಓದುಗನಿಲ್ಲದೆ ನಾವಿಲ್ಲ

ಆತನ ಬಿಟ್ಟರೆ ಕಿಂಚಿತ್ತೂ ನಮಗೆ ಗೊತ್ತಿಲ್ಲ ।

ಇದನ್ನು ಓದದ್ದಿದ್ದರೂ ಸಹ ಪರವಾಗಿಲ್ಲ

ಆದರೆ ಓದುಗನಿಗೆ ಸಾಟಿ ಯಾರಿಲ್ಲ ।।

Design a site like this with WordPress.com
Get started