ಬಲ್ಲೆ

He:- Hey, how fluent are you in Kannada? Me:- ಬೆಣ್ಣೆಯಷ್ಟು ಮೃದುವಾಗಿ ಸ್ಪಟಿಕದಷ್ಟು ಶುಭ್ರವಾಗಿ ಸಲಾಕೆಯಷ್ಟು ಕಠಿಣವಾಗಿ ಕಠಾರಿಯಷ್ಟು ಹರಿತವಾಗಿ ಸಮುದ್ರದಷ್ಟು ವಿಶಾಲವಾಗಿ ಬಂಡಿಯಷ್ಟು ವೇಗವಾಗಿ ಅಲೆಯಷ್ಟು ನಿಖರವಾಗಿ ಅಚಲದಷ್ಟು ದೃಢವಾಗಿ ಕಣಿವೆಯಷ್ಟು ಆಳವಾಗಿ ಮಾರುತನಷ್ಟು ಸರಾಗವಾಗಿ ಮಾತನಾಡಬಲ್ಲೆ

ಮಹೇಂದ್ರ

ಭಾರತ ಕಂಡಂತಹ ಗೂಟರಕ್ಷಕ ದಂತಕಥೆ ಈ ಮಹೇಂದ್ರ।ಅವರ ಹೊಗಳುಭಟ ಅಭಿಮಾನಿಗಳಿಗೆ ಇವರೇ ಇಂದ್ರ ಚಂದ್ರ।। ಸಹನೆಯ ಮೂಲಕ ನಿಯಂತ್ರಿಸಿಕೊಂಡರೂ ತಮ್ಮ ಪಂಚೇಂದ್ರ।ಮಿಂಚಿನ ಓಟದಲ್ಲಿ ಮತ್ತು ಬಾಹುಗಳ ಚಲನೆಯಲ್ಲಿ ಇವರೇ ಕಣ್ರೀ ನರೇಂದ್ರ।। ಬೀರಪ್ಪ

ಮಾರ್ಗಸೂಚಿ

ಕಂಡ ಕಂಡಲ್ಲಿ ಕೈ ಬಾಯಿ ತೊಳೆಯದೆ, ಚೆನ್ನಾಗಿ ಕುದಿಸದೆ ಸೇವಿಸಬೇಡಿ ಉಪಹಾರ । ಮುಖಗವಸು ಧರಿಸದೇ, ಸಾಮಾಜಿಕ ಅಂತರ ಕಾಯ್ದಿರಿಸಿದೆ ಮಾಡಬೇಡಿ ಅಡ್ಡಾದಿಡ್ಡಿ ವಿಹಾರ ।। ಮಾರ್ಗಸೂಚಿಗಳನ್ನ ಉಲ್ಲಂಘಿಸುವ ಮೂಲಕ ತೋರಬೇಡಿ ಎಂದಿಗೂ ದುರಹಂಕಾರ। ಉಢಾಫೆಯ ಮನೋಭಾವವನ್ನ ಹೊಂದರೆ, ಕೊರೋನಾ ವೈರಾಣುವೂ ಮಾಡಬಹುದು ಪ್ರಹಾರ ।। -ಬೀರಪ್ಪ

ಗುರಿ

ಆಗಬೇಡ ಎಂದಿಗೂ ನೀ, ಯಾರದ್ದೋ ಹರಕೆಯ ಕುರಿ । ಆಡಿಕೊಳ್ಳುವವರನ್ನ, ಸಾಧನೆಯ ಮೂಲಕ ಹೆಡೆ-ಮುರಿ ।। ಏಕೆಂದರೆ ಜೀವನದಲ್ಲಿ, ಗೆಲ್ಲುವುದೇ ನಮಗೆ ಮುಖ್ಯ ಗುರಿ । ಇಲ್ಲವಾದರೆ, ನಿನ್ನ ಮುಡಿಗೆ ಬರಲಾರದು ಯಾವುದೇ ಗರಿ ।। -ಬೀರಪ್ಪ

ಕನಸು

ಬಲ್ಲದ ವಿದ್ಯೆ, ಇಲ್ಲ ಸಲ್ಲದ ಮಾತು, ಒಲ್ಲದ ಮನಸ್ಸು । ಮುರುಕು ಧರ್ಮಶಾಲೆಯ, ಹರುಕು ಬಟ್ಟೆಯ ತಿರುಕನ ಕನಸು ।। ಕಾರ್ಯಪ್ರವೃತ್ತರಾಗದಿದ್ದರೆ, ಎಂದಿಗೂ ಆಗುವುದಿಲ್ಲ ನನಸು । ಖಾರವಾಗಿ ಪ್ರತಿಕ್ರಿಯಿಸಿದ್ದಕ್ಕೆ, ಮಾಡಿಕೊಳ್ಳದಿರಿ ಮುನಿಸು ।। ಬೀರಪ್ಪ

Design a site like this with WordPress.com
Get started