मम भारतः

जन्मभूमिश्च कर्मभूभूमिश्च पुण्यभूमिश्च, मम भारत: | वसुधैव कुटुम्बकम् इति वयं कुर्वन्ति युगे युगे स्वागतः || भव्य भारतम् दृष्ट्वा, म्लेच्छा: दण्डयात्राम्कर्तुं आगतः | मातृभूमिं संरक्षणार्थं बहवः राजः तथा सैनिकाः दिवंगतः || नैऋत्ये, म्लेच्छस्य पैशाचिक कृत्ये बहवः प्रजा: मृताः | अधुना पाश्चिमात्य संस्कृते: व्यामोहेन, अस्माकं धर्मकर्मस्च भूगताः || बीरप्प

ಗುರಿ

ಆಗಬೇಡ ಎಂದಿಗೂ ನೀ, ಯಾರದ್ದೋ ಹರಕೆಯ ಕುರಿ । ಆಡಿಕೊಳ್ಳುವವರನ್ನ, ಸಾಧನೆಯ ಮೂಲಕ ಹೆಡೆ-ಮುರಿ ।। ಏಕೆಂದರೆ ಜೀವನದಲ್ಲಿ, ಗೆಲ್ಲುವುದೇ ನಮಗೆ ಮುಖ್ಯ ಗುರಿ । ಇಲ್ಲವಾದರೆ, ನಿನ್ನ ಮುಡಿಗೆ ಬರಲಾರದು ಯಾವುದೇ ಗರಿ ।। -ಬೀರಪ್ಪ

ಕನಸು

ಬಲ್ಲದ ವಿದ್ಯೆ, ಇಲ್ಲ ಸಲ್ಲದ ಮಾತು, ಒಲ್ಲದ ಮನಸ್ಸು । ಮುರುಕು ಧರ್ಮಶಾಲೆಯ, ಹರುಕು ಬಟ್ಟೆಯ ತಿರುಕನ ಕನಸು ।। ಕಾರ್ಯಪ್ರವೃತ್ತರಾಗದಿದ್ದರೆ, ಎಂದಿಗೂ ಆಗುವುದಿಲ್ಲ ನನಸು । ಖಾರವಾಗಿ ಪ್ರತಿಕ್ರಿಯಿಸಿದ್ದಕ್ಕೆ, ಮಾಡಿಕೊಳ್ಳದಿರಿ ಮುನಿಸು ।। ಬೀರಪ್ಪ

ಕುಟಿಲ

ತನ್ನ ಕುಟಿಲತೆಯ ಮೂಲಕ ಶಕುನಿಯನ್ನೇ ನಾಚಿಸುವಂತ ದೇಶ ಈ ಚೀನಾ ಕಂಡವರ ಆಸ್ತಿಯನ್ನ, ತನ್ನ ಸಾರ್ವಭೌಮತಕ್ಕೆ ಧಕ್ಕೆ ತರುವುದೆಂದು ಮಾಡುತ್ತದೆ ವಿಲೀನ| ಅದರ ವಿಷ ಕಕ್ಕುವ ಸಿದ್ಧಾಂತದ ಮೂಲಕ ಮಾಡುತ್ತದೆ ಜಗದ ಪ್ರತಿಯೊಂದು ಮೂಲೆಯಲ್ಲಿ ಮಲೀನ ವಾಮ ಸಿದ್ಧಾಂತದ ಅಡಿಯಾಳಾಗುವ ಮೂಲಕ, ನಮ್ಮಲ್ಲಿ ಕೆಲವರು ಆಗಿರುವರು ಮತಿಹೀನ||

Design a site like this with WordPress.com
Get started