Since a long time, I had a desire to pen down a poem and publish it on my blog.But , things didn’t turn out as I had expected it to be. So, this is the apt time for me to draft a poem in order to pay tribute to one of the greatest family in Indian history.
With Regards ,
Beerappa
ಸೂರ್ಯವಂಶ
ಶ್ರದ್ಧದೇವ ಮನುವಿನ ಪುತ್ರ ಈ ಇಕ್ಷ್ವಾಕು
ಸಕಲ ಕಲೆಯಲ್ಲಿ ಮೂಡಿಸಿದನಂತೆ ತನ್ನದೆ ಛಾಪು |
ಯುದ್ಧದಲ್ಲಿ ಮಾಡುತ್ತಿದ್ದ ದಾಳಿಯು ಕರಾರುವಾಕು
ಆದನಂತೆ ಅಧಿಪತಿಯು ಒಟ್ಟು ದಿಕ್ಕುಗಳು ನಾಲ್ಕು ||೧||
ರಾಜ ನಭಿಯ ಜೇಷ್ಠ ಪುತ್ರ ರಿಷಭನಾಥ
ಆದನು ಜೈನರಲ್ಲಿ ಮೊದಲನೆಯ ತೀರ್ಥಂಕರ ಈತ |
ಈತನ ಹಲವು ನಾಮಗಳಲ್ಲಿ ಒಂದು ಆದಿನಾಥ
ಮುಂದೆ, ಈತ ಆದನು ಬಡವ ಬಲ್ಲಿಗನಿಗೆ ನಾಥ ||೨||
ತ್ರೇತಾಯುಗದ ಅತ್ಯಂತ ಧರ್ಮ ನಿಷ್ಠ ರಾಜ ಅಂಬರೀಶ
ಪಟ್ಟವನ್ನೇರಿದ ಕೂಡಲೇ ಆದನು ಭುವನೇಶ |
ಈತನ ಏಕಾದಶಿಯ ಉಪವಾಸವು ಅತ್ಯಂತ ವಿಶೇಷ
ದುರ್ವಾಸರಿಂದ ಕಾಪಾಡಲು ಸುದರ್ಶನನು ಮಾಡಿದನು ಪ್ರವೇಶ ||೩||
ಕಾಳಿದಾಸನ ರಘುವಂಶದಲ್ಲಿ ಉಲ್ಲೇಖಿಸಿರುವ ನೃಪ ಶ್ರೇಷ್ಠ ದಿಲೀಪ
ಒಮ್ಮೆ ಸಂತಾನವಿಲ್ಲವೆಂದು ಆತನಿಗೆ ಕಾಡಿತು ವಿಲಾಪ |
ನಂದಿನಿಯನ್ನು ಕೊಲ್ಲುವೆನೆಂದು ವ್ಯಾಘ್ರ ಮಾಡಿತು ಪ್ರಲಾಪ
ದಿಲೀಪನು ವ್ಯಾಘ್ರದೊಂದಿಗೆ ಮಾಡಿದನು ಕಲಾಪ |
ತನ್ನ ಪ್ರಾಣವನ್ನೇ ಸ್ವೀಕಾರ ಮಾಡಿಕೋ ಎಂದ ಆ ಮಹಾನೃಪ
ಈತನ ಗುಣವನ್ನ ಮೆಚ್ಚಿ ನಂದಿನಿಯು ಕೊಟ್ಟಳು ವರದ ಆಲಾಪ ||೪||
ಮರ್ಯಾದೆಯಲ್ಲಿ ಪುರುಷೋತ್ತಮ ಆಗಿರುವನು ಶ್ರೀರಾಮಚಂದ್ರ
ಹಾಗೆಯೇ ಸತ್ಯ ನುಡಿಯುವುದರಲ್ಲಿ ಈ ಸತ್ಯ ಹರಿಶ್ಚಂದ್ರ |
ಈತನ ವಚನಗಳಿಗೆ ಸಾಕ್ಷಿಯಾದರಂತೆ ಸೂರ್ಯ ಹಾಗೂ ಚಂದ್ರ
ನಿಷ್ಠೆ ಹಾಗೂ ಧರ್ಮವನ್ನು ಮೆಚ್ಚಿದನಂತೆ ಸಾಕ್ಷಾತ್ ದೇವೇಂದ್ರ ||೫||
ಸೂರ್ಯವಂಶದ ಮೂವತೆಂಟನೆಯ ದೊರೆ ಅಜ
ಪಳಗಿಸುತಿದ್ದನಂತೆ ಮದವೇರಿದ ಗಜ |
ಪತ್ನಿವಿಯೋಗ ತಾಳಲಾರದೆ ತನಗೆ ತಾನೇ ಮಾಡಿಕೊಂಡನಂತೆ ವಜಾ
ತನ್ನ ಪುತ್ರ ದಶರಥನನ್ನು ನೇಮಿಸಿದನಂತೆ , ಆಗು ನೀ ಮುಂದಿನ ಮಹಾರಾಜ ||೬||
ಅಜೀತನಾಥನ ಕಿರಿಯ ಸಹೋದರ ಮಹಾರಾಜ ಸಗರ
ಆತನ ರಾಜಧಾನಿಯಾಗಿತ್ತು ಭವ್ಯವಾದ ವಿದರ್ಭ ನಗರ |
ಆಯೋದ್ಯೆಯದ ಸ್ಥಳಾಂತರಿಸಿದರು ತನ್ನ ಅಗರ
ತನ್ನ ಅಶ್ವಮೇಧಯಾಗದಿಂದ ಅಳುಕಿತು ಇಡಿ ಅಮರಾವತಿ ನಗರ ||೭||
ಪಿತೃಗಳಿಗೆ ಮೋಕ್ಷ ಕೊಡಿಸಿದ ಮಹಾನ್ ಧೀಮಂತ ಈ ಭಗೀರಥ
ತಪಸ್ಸಿಗೆ ಮೆಚ್ಚಿ ಗಂಗೆಯು ಪಾಲಿಸಿದಳು ಈತನ ರಥ |
ಧರೆಗಿಳಸಲು ಆಕೆಗೆ ತಪಸ್ಸಿನ ಮೂಲಕ ಮಾಡಿದನು ಮನವಿ
ಶಿವನ ಜಟೆಯಿಂದ ಧರೆಗಿಳಿದು ಬಂದಳು ಜಾಹ್ನವಿ ||೮||
ಸುದಕ್ಷಿಣೆ ದಿಲೀಪ ಸುತ ,ಚಕ್ರವರ್ತಿ ರಘು
ದಾನ ನೀಡುವುದರಲ್ಲಿ ಬೀರುತ್ತಿದ್ದನು ಉದಾರತೆಯ ನಗು |
ಭಂಡಾರ ಕ್ಷೀಣಿಸಿದ ಸಮಯದಲ್ಲಿ ಗುರುದಕ್ಷಿಣೆ ಪಡೆಯಲು ಬಂದನು ಕೌತ್ಸ
ರಘುವಿನ ಪರಾಕ್ರಮವನ್ನು ನೆನಪಿಸಿಕೊಂಡು,ಕನಕ ವೃಷ್ಠಿ ಹರಿಸಿದನು ವಿಷ್ರವ ವತ್ಸ ||೯||
ಅತಿರಥರಲ್ಲಿ ಮಹಾರಥಿ ಈ ದಶರಥ
ದಾನವರ ವಿರುದ್ಧ ಹೋರಾಡಲು ದೇವಲೋಕದ ಅತ್ತ ಹೊರಳಸಿದನು ತನ್ನ ರಥ |
ಅಯೋಧ್ಯೆಯಲ್ಲಿ ಒಮ್ಮೆ ಆಗಿತ್ತು ಭೀಕರ ಕ್ಷಾಮ
ಶನೇಶ್ವರನ ಕೃಪಾಕಟಾಕ್ಷದಿಂದ ನೋಡಿಕೊಂದನು ಪ್ರಜೆಗಳ ಕ್ಷೇಮ ||೧೦||
ತ್ರೇತಾಯುಗದಲ್ಲಿ ಆತನ ಹೆಸರು ಶ್ರೀರಾಮ
ದ್ವಾಪರಯುಗದಲ್ಲಿ ಆತನ ಹೆಸರು ಶ್ಯಾಮ |
ಆತನನ್ನು ಪ್ರೀತಿಯಿಂದ ಭಕ್ತರು ಕರೆಯುತ್ತಿದ್ದರು ರಾಘವ ಎಂಬ ನಾಮ
ಹಲವಾರು ರಾಕ್ಷಸರನ್ನು ಸಂಹರಿಸಿದನು ಆ ಅವತಾರದಲ್ಲಿ ಸಾಕ್ಷಾತ್ ಪರಂಧಾಮ ||೧೧||
ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠವಾದ ವಂಶ ಈ ಸೂರ್ಯವಂಶ
ವಂಶದಲ್ಲಿ ಹುಟ್ಟಿದ ಪ್ರತಿಯೊಬ್ಬ ರಾಜನಲ್ಲಿತ್ತು ದೇವಾಂಶ |
ಪ್ರತಿಯೊಬ್ಬ ರಾಜನಲ್ಲಿತ್ತು ತನ್ನದೆಯಾದಂತಹ ವಿಶ್ಲೇಷಣಾ ಅಂಶ
ಇದೆ ನನ್ನ ಕಾವ್ಯದ ಅತ್ಯುನ್ನತ ಸಾರಾಂಶ ||೧೨||
-ಭಾಸ್ಕರ
Good information
LikeLike
Thank You
LikeLike
Well tried .. I liked it
LikeLike
Thank you 🙂
LikeLike
Good one
LikeLike
Thanks,Chandresh
LikeLike
Good information, I like it.
LikeLike
Thanks,Sunil:)
LikeLike
Good information,
Well tried, I like it.
LikeLike
Beerappa na majaka….
LikeLike
😉
LikeLike
Nice,
ಧರ್ಮೋ ರಕ್ಷತಿ ರಕ್ಷತ
LikeLiked by 1 person
Thanks ,Nagaraju
LikeLike
Nice one
LikeLike
Thanks,Rajesh
LikeLike